Friday, May 29, 2009

ಹನ್ನೆರಡು ವರ್ಷಗಳ ನಂತರ...!!


ಹಳೆಯದೊಂದು ಹಾಡು ಎಲ್ಲರಿಗು ನೆನಪಿರುತ್ತೆ-" ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ದ್ವೇಷ ನೂರು ವರುಷ" ಅಂತ. ಇಲ್ಲಿ ಯಾಕಪ್ಪಾ ಇದು ಅಂದ್ರೆ, ದ್ವೇಷದ ವಿಷಯ ಅಂತಂದಾಗ ಅಷ್ಟೊಂದು long years ತನಕ ನೆನಪು ಇಟ್ಕೊಳ್ಳೋದು ಸಹಜ.Help ಮಾಡಿರೋ ವಿಷಯಗಳನ್ನ , ಜನರನ್ನ ನೆನೆಸಿಕೊಳ್ಳೋದು ಕಡಿಮೇನೆ. ಅದು ಅಲ್ಲದೆ, ಈಗಿನ ಕಾಲದಲ್ಲಿ ನಾವು students ಗಳೇ teachers ಗಳನ್ನ ನೆನಪಿಡೋದು ಕಷ್ಟ, ಅಂತಾದ್ರಲ್ಲಿ ಒಬ್ಬ teacher ತನ್ನ ಸ್ಟುಡೆಂಟ್ ನೆನಪಿಟ್ಟು ಮಾತನಾಡಿಸಿದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ I guess.


ಅಂತ ಒಂದು situation ನನ್ನು ನಾನು witness ಮಾಡಿದ್ದು ಮೊನ್ನೆ. ನನ್ನ "ಅನುಭವ ಮಂಟಪ" ಸ್ನೇಹಿತರಿಗೆಲ್ಲ ನಮ್ಮ ಒಬ್ಬ ಸರ್ ಬಗ್ಗೆ ಕಂಡಿತ ನೆನಪಿರುತ್ತೆ.. ಅವ್ರು ನಮ್ಮ V.N sir, ನಮ್ಮ ಕನ್ನಡ ಮಾಸ್ತರ್ ವಾಸುದೇವ್ ನಾಡಿಗ್. ನಮ್ಮ ಸ್ಕೂಲ್ ನಲ್ಲಿ, ಜಸ್ಟ್ ಎರಡು ವರ್ಷ ಮಾತ್ರ ಇದ್ದರು, ಆದ್ರೆ ನನ್ನ ಪ್ರಕಾರ he left there behind an everlasting impression.ಬಹಳ ಜನ ಸರ್ ನನಗೆ partiality ಮಾಡುತ್ತಿದ್ದರು ಅಂತ ಒಂದು feel. ಅದು ನಿಜ ಅಲ್ಲದೆ ಇದ್ದರು, i liked that feel though!!!


ಇದ್ದಕ್ಕಿದ್ದ ಹಾಗೆ ನೆನಪು ಹೇಗೆ ಅಂದ್ರೆ, ನಾನು ಮತ್ತು ನನ್ನ ಸ್ನೇಹಿತೆ( ಅದು ಯಾರು ಅಂತ ಮುಂದಿನ ಬ್ಲಾಗ್ ಗಳಲ್ಲಿ ತಿಳಿಸುತ್ತೇನೆ) ಬಹಳ ದಿನಗಳಿಂದ(ಕಳೆದ ೧೨ ವರ್ಷದಿಂದ ನಾನು ಅವರನ್ನ ಭೇಟಿ ಮಾಡಿಲ್ಲ)ಅವರ contact ಗೆ try ಮಾಡ್ತಾ ಇದ್ವಿ. ಅದು ಹೇಗೋ ಮೊನ್ನೆಯ ದಿನ, ಅನಿರೀಕ್ಷಿತ ರೀತಿಯಲ್ಲಿ ಇಂಟರ್ನೆಟ್ನಲ್ಲಿ ಅವಳಿಗೆ ಅವರ ನಂಬರ್ ಸಿಕ್ತು. ಅಳುಕಿನಿಂದಲೇ ಡಯಲ್ ಮಾಡಿ ನೋಡಿದ್ರೆ ಅವ್ರೆ ಫೋನ್ recieve ಮಾಡಿದ್ರು. ನಮ್ಮ ಜೊತೆ ಮಾತಾಡಿ ಖುಷಿ ಪಟ್ಟರು. ನಮ್ಮಿಬ್ಬರಿಗೂ ಖುಷಿ ಕೊಟ್ಟ ಸಂಗತಿ ಅಂದ್ರೆ, ಅವ್ರು ನಮ್ಮನ್ನು recognise ಮಾಡಿದ್ದು , ಅದಕ್ಕಿಂತ ಜಾಸ್ತಿ ಏನು ಬೇಕು?


ಸರ್ ಸಧ್ಯದಲ್ಲೇ ಮೀಟ್ ಮಾಡೋ ಯೋಚನೆ ಇದೆ. ಅವರನ್ನ ಭೇಟಿ ಆದ ಮೇಲೆ ಇನ್ನಷ್ಟು ವಿಷಯಗಳನ್ನ ಬರೆಯುತ್ತೀನಿ. ಅಂದಹಾಗೆ, ಸರ್ ಈಗ ಬೆಂಗಳೂರಿನ ಬಳಿಯ ಚಿಂತಾಮಣಿ ತಾಲೂಕಿನ ಬಳಿ " ನವೋದಯ ಶಾಲೆಯಲ್ಲಿ" ಶಿಕ್ಷಕರಾಗಿದ್ದಾರೆ. "ನಚಿಕೇತ" ಎಂಬ ಪುಟ್ಟ ಮಗ ಇದ್ದಾನೆ. ಸೊ, ಮತ್ತೆ ಬರೆಯುವವರೆಗೂ.......

No comments:

Post a Comment