೨) ಇನ್ನೂ ಕೆಲವೊಮ್ಮೆ ನಿಮ್ಮ ರಕ್ತದ ಗುಂಪು ನೀವು ದಾನ ಮಾಡಲಿಚ್ಚಿಸಿದ ರೋಗಿಯ ರಕ್ತದ ಗುಂಪಿನೊಂದಿಗೆ ಹೊಂದಾಣಿಕೆಯಾದರು ಸಹ, ನೀವು ಜ್ವರದಿಂದ ಬಳಲುತ್ತಿದ್ದರೆ, ಅಥವಾ ೪೫ ಕಿಲೋಗಿಂತ ಕಡಿಮೆ ತೂಕವಿದ್ದರೆ, ಅಥವಾ ನಿಮ್ಮಲ್ಲಿ ಏನಾದ್ರೂ ರಕ್ತದಿಂದ ಹರಡಬಹುದಂತ ರೋಗಾಣುಗಳಿದ್ದಲ್ಲಿ ನಿಮ್ಮ ರಕ್ತವನ್ನ ಬೇರೆಯವರಿಗೆ ನೀಡಲು ಬರುವುದಿಲ್ಲ.
೩) ಮೇಲಿನ ಎರಡು ವಿಷಯಗಳು ಎಲ್ಲರಿಗು ತಿಳಿದಿರುವ ಸಾಧ್ಯತೆ ಇದೆ. ಇವೆರಡಕ್ಕಿಂತ ಮುಖ್ಯವಾದ ಮತ್ತು ರೋಗಿಯ ಸಂಬಂಧಿಕರು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಎಂದರೆ "ನಮ್ಮ ಕಡೆಯ ಹುಡುಗರೇ ರಕ್ತದಾನ ಮಾಡಿದರು ಕೂಡ ರಕ್ತ ನಿಧಿ ಘಟಕದವರು test ಮಾಡಲು ದುಡ್ಡು ಕಟ್ಟಲು ಕೇಳುತ್ತಿದ್ದಾರೆ. ನಮ್ಮದೇ ರಕ್ತಕ್ಕೆ ನಾವು ಮತ್ತೆ ದುಡ್ಡು ಕಟ್ಟಬೇಕಾದ್ದು ಯಾಕೆ?". ಇಲ್ಲಿ ನಿಮ್ಮ ಕಡೆಯ ವ್ಯಕ್ತಿಯೇ ರಕ್ತದಾನ ಮಾಡಿದರು ಕೂಡ, ಹಾಗು ಆ ವ್ಯಕ್ತಿ ಬಾಹ್ಯವಾಗಿ ಆರೋಗ್ಯವಂತನಂತಿದ್ದರು, ಅವನ/ಳ ರಕ್ತದಲ್ಲಿ ರೋಗಲಕ್ಷಣಗಳಿಲ್ಲದೆ ವಾಸಿಸುವ ರೋಗಾಣುಗಳು ಇರಬಹುದು. ಹಾಗಾಗಿ ಅಂತಹ ರೋಗಾಣುಗಳನ್ನ ಪತ್ತೆ ಹಚ್ಚುವ ಸಲುವಾಗಿ ಕೆಲವು ಪರೀಕ್ಷೆಗಳನ್ನ ರಕ್ತದ ಮೇಲೆ ಮಾಡುವುದು ಅನಿವಾರ್ಯ ಹಾಗು ಈ ಪರೀಕ್ಷೆಗಳಿಗೆ ನಿಮಗೆ ಹಣ ಕಟ್ಟಲು ಹೇಳುತ್ತಾರೆ ವಿನಃ ಇನ್ಯಾವುದೇ ಕಾರಣಕ್ಕಾಗಿ ಅಲ್ಲ. ಆ ರೋಗಾಣುಗಳು ಯಾವುವು ಎಂದು ಕೇಳಿದರೆ ಬಹುಶ ನಿಮಗೆ ಅವುಗಳು ಪತ್ತೆಯ ಮಹತ್ವ ತಿಳಿಯಬಹುದು- HIV , Hepatitis , Syphilis ಇವು ಪ್ರಮುಖವಾದವು. ತಡೆಯಬಹುದಾದಗಳು ಇಂತಹ ರೋಗಗಳನ್ನ ರಕ್ತದ ಮೂಲಕ ರೋಗಿಗೆ ಹರಡುವುದು ಯಾವ ನ್ಯಾಯ ಅಲ್ಲವ? ಹಾಗಾಗೆ ಆ ಪರೀಕ್ಷೆಗಳು ಮಹತ್ವವನ್ನ ಪಡೆದುಕೊಳ್ಳುತ್ತವೆ.
೪) ಇನ್ನ ಕೆಲವರು "ಎಷ್ಟು ದುಡ್ದಾದರು ಕೊಡುತ್ತೇವೆ ನಿಮ್ಮ ಆಸ್ಪತ್ರೆಯಲ್ಲಿಯೇ ಶೇಖರಿಸಿರುವ ರಕ್ತವನ್ನ ನಮಗೆ ಕೊಡಿ ಎಂದರೆ ಆಸ್ಪತ್ರೆಯವರು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶೇಖರಿಸಿರುವ ರಕ್ತವನ್ನ ಕೊಡಬೇಕಾದರೆ condition ಹಾಕಿ ನಿಮ್ಮ ಕಡೆಯವರು ಯಾರಾದರು ರಕ್ತ ಕೊಟ್ಟಲ್ಲಿ (ಅದು ಬೇರೆ ಗುಂಪಿನದ್ದು ಆಗಿದ್ದರು ಸಹ) ನಿಮ್ಮ ರೋಗಿಗೆ ಹೊಂದುವ ಗುಂಪಿನ ರಕ್ತವನ್ನ ಬದಲಾಯಿಸಿ ಕೊಡುತ್ತೇವೆ"ಎಂದು. ಇಲ್ಲಿ ಪ್ರಶ್ನೆ ದುಡ್ದಿನದಲ್ಲ. ಆಸ್ಪತ್ರೆಯಲ್ಲಿ ಶೇಖರಿಸಿರುವ ರಕ್ತ ರೋಗಿಗಳಿಗೆ ಅನ್ನೋದು ಅಷ್ಟೇ ಸತ್ಯ. ಅದನ್ನ ತುರ್ತು ಸಮಯದಲ್ಲಿ ಕೊಡುತ್ತಾರೆ ಅನ್ನೋದು ತಿಳಿದಿರುವ ವಿಷಯವೇ. ಆದರೆ ಒಮ್ಮೆ ಯೋಚಿಸಿ ನೋಡಿ, ಆಸ್ಪತ್ರೆಯವರಿಗಾದರು ಆ ರಕ್ತ ಎಲ್ಲಿಂದ ಬರಬೇಕು? ಅದು ತರಕಾರಿಯೋ ಅಥವಾ ಆಟದ ವಸ್ತುವಲ್ಲ, ಭೂಮಿಯಲ್ಲಿ ಬೆಳೆಯೋಕೆ ಇಲ್ಲ ಅಂಗಡಿಯಲ್ಲಿ ಖರೀದಿಸೋಕೆ. ಒಬ್ಬ ಆರೋಗ್ಯವಂತ ಮನುಷ್ಯನ ದೇಹದಿಂದ ಮಾತ್ರವೇ ರಕ್ತವನ್ನ ತೆಗೆದು ಶೇಖರಿಸಲು ಸಾಧ್ಯ. ಹಾಗಾಗಿ ಎಲ್ಲರಿಗು ಕೇವಲ ದುಡ್ಡಿಗೆ ಹಂಚಿದರೆ, ಉತ್ಪತ್ತಿಯ ಬಗ್ಗೆ ಯಾರು ಗಮನ ಕೊಡಬೇಕು ಹೇಳಿ? ಹಾಗಾಗಿ ಆಸ್ಪತ್ರೆಗಳು ನಿಮ್ಮ ರೋಗಿಗೆ ಹೊಂದುವ ರಕ್ತವನ್ನ ಕೊಡುವ ಮುಂಚೆ ನಿಮ್ಮ ಕಡೆಯವರಿಂದ ಅಷ್ಟೇ ಪ್ರಮಾಣದ ಬದಲಿ ರಕ್ತವನ್ನ ಕೇಳುತ್ತಾರೆ, ಯಾಕಂದರೆ ನಿಮ್ಮ ಕಡೆಯವರ ರಕ್ತದ ಗುಂಪು ನಾಳೆ ಬರುವ ಇನ್ನ್ಯಾವುದೋ ರೋಗಿಯೊಬ್ಬರಿಗೆ ಹೊಂದಿಕೊಳ್ಳಬಹುದು ಮತ್ತು ನಾಳಿನ ದಿನ ಆಸ್ಪತ್ರೆಗೆ ತುರ್ತು ಸಮಯಕ್ಕೆ ರಕ್ತದ ಕೊರತೆ ಉಂಟಾಗಬಾರದು ಎಂದು. ಇದು ಇದು ಸಮಂಜಸವಲ್ಲವೇ?
ವಸ್ತುಸ್ಥಿತಿ ಏನೆಂದರೆ ನಮ್ಮ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಹಳನೆ ಇದೆ, ಎಷ್ಟೇ ಸ್ವಯಂ ಸೇವಾ ಸಂಘಟನೆಗಳು ಪ್ರಯತ್ನ ಪಟ್ಟರು ಕೂಡ ಇದರ ಕೊರತೆ ನೀಗಿಸೋದರಲ್ಲಿ ಫಲ ಕಾಣೋದು ಅಷ್ಟು ಸುಲಭವಲ್ಲ. ಆದರೆ ಯಾವುದೇ ಸಮಸ್ಯೆ ಕೂಡ ದೊಡ್ಡದಲ್ಲ ಅನ್ನೋದು ಅಷ್ಟೇ ಸತ್ಯ, ಪ್ರತಿಯೊಬ್ಬರೂ ರಕ್ತ ದಾನ ಮಾಡಬಹುದು ಹಾಗು ವರ್ಷಕ್ಕೆ ಎರಡರಿಂದ ಮೂರು ಬಾರಿ ಮಾಡಬಹುದು. ಕನಿಷ್ಠ, ವರ್ಷಕ್ಕೆ ಒಮ್ಮೆ ನಮ್ಮ ಜನ್ಮದಿನದಂದು ರಕ್ತ ದಾನ ಮಾಡೋಣ. ನಮ್ಮ ರಕ್ತದಿಂದ ಇನ್ನೊದು ಜೀವ ಉಳಿದರೆ ನಮ್ಮ ಜನ್ಮದಿನ ಸಾರ್ಥಕವಾದಂತೆ. ಎಲ್ಲದಕ್ಕಿಂತ ಮುಖ್ಯವಾಗಿ ಜನಗಳ ತಿಳವಳಿಕೆಯನ್ನ ಬದಲಿಸೋಣ." ಕೊಳ್ಳೆ ಹೊಡೆದು ಹೋದ ಮೇಲೆ....................." ಹಾಗಾಗೋದು ಬೇಡ. ಎಚ್ಹೆತ್ತುಕೊಳ್ಳೋಣ. ನೀವು ಇದನ್ನ ಓದಿ, ಅದು ಉಪಯುಕ್ತ ಅನ್ನಿಸಿದಲ್ಲಿ ನಿಮ್ಮ ಸ್ನೇಹಿತರಿಗೂ ತಿಳಿಸಿ.







