ನಾನು, ಇದರ ಹಿಂದಿನ ಬ್ಲಾಗ್ ಬರೆಯುವಾಗ, ನಮ್ಮ ತಂಡದ ಹೆಸರು ಯಾವ ಕಾರಣಕ್ಕಾಗಿ "೨೦೦೧ರ ತುಂಟ"ರು ಅಂತ ಬಂತು ಅನ್ನೋದರ ಹಿಂದಿನ ಘಟನೆ ಹಾಗೂ ನಮ್ಮ ತಂಡದ ಚಟುವಟಿಕೆಗಳ ಬಗ್ಗೆ ತಿಳಿಸಿಕೊಡುತ್ತೀನಿ ಅಂತ ಹೇಳಿದ್ದೆ. ಇಲ್ಲಿ ಆ ಪ್ರಸಂಗಗಳನ್ನ ನೆನಪಿಸಿಕೊಡ್ತೀನಿ.
ಆ ಒಂದು ಮಾತು ಮರೆತಿದ್ದೆ. ಅದೇನೆಂದರೆ, ಹಿಂದಿನ ಬ್ಲಾಗ್ ಓದಿದ ನನ್ನ ತಂಡದ ಸ್ನೇಹಿತರು, ನನ್ನ ಅಡ್ಡ ಹೆಸರನ್ನು ಯಾಕೆ ಹೇಳಿಕೊಂಡಿಲ್ಲ ಅಂಥ ಪ್ರಶ್ನಿಸುತ್ತಾ ಇದ್ದರೆ. ಆದ ಕಾರಣ ಇಲ್ಲಿ ಹೇಳಿಬಿಡುತ್ತೇನೆ. ನನಗೆ ನನ್ನ ತಂಡದವರು "ಮಠಾಧೀಶ" ಅಂಥ ನಾಮಕರಣ ಮಾಡಿರೋದುಂಟು. ಅದಕ್ಕೆ ಅಂಥಾ ವಿಶೇಷ ಕಾರಣ ಏನು ಇಲ್ಲ, ಹಾಗಂತ ಸುಳ್ಳು ಹೇಳೋಕ್ಕೊಗಲ್ಲ. ಮಾತಿನಲ್ಲಿ ಎಲ್ಲರಿಗು ಮಠ ಹತ್ತಿಸೋ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುವ ನಿಪುಣತೆ ಇತ್ತು ಅನ್ನೋ ಹಿನ್ನೆಲೆಯಿಂದ. ಅದು ಎಷ್ಟು ಸುಳ್ಳು-ಎಷ್ಟು ನಿಜ ಅನ್ನೋದನ್ನ ಅವರುಗಳೇ ಹೇಳಬೇಕು!!!
"ಮೈಸೂರು ವೈದ್ಯಕೀಯ ಮಹಾವಿದ್ಯಾಲಯ", ಈ ಸಂಸ್ಥೆಯ ಹೆಸರು ಕೇಳಿದ್ರೆ ಎಲ್ಲ್ರೂ ಹೇಳೋ ಒಂದೇ ಮಾತು- ಬಹಳ ಒಳ್ಳೇ ಕಾಲೇಜು, ಅಲ್ಲಿಗೆ ಸೇರೋರೆಲ್ಲ ಬುದ್ದಿವಂತ್ರು. ಹೌದು. ನಿಜ ಕೂಡಾ.ಇಲ್ಲಿಗೆ ಬರೋ ಎಲ್ಲರೂ ಅವರವರ ಊರುಗಳ, ಅವರವರ ಹಿಂದಿನ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಗಳಾಗಿದ್ದವರೆ.ಆದಕಾರಣ,ಈ ಕಾಲೇಜಿನಲ್ಲಿ ನಮ್ಮನ್ನ ನಾವು ಗುರುತಿಸಿಕೊಳ್ಳಬೇಕು ಅಂದ್ರೆ ಕ್ಲಾಸ್ ರೂಮಿನಿಂದ ಹೊರಗಿನ ಚಟುವಟಿಕೆಗಳಿಂದ ಮಾತ್ರ ಸಾಧ್ಯವಿತ್ತು.
ಕಾಲೇಜಿಗೆ ಪಾದರ್ಪಣೆ ಮಾಡಿದ ಮೊದಲ ಮೂರು ತಿಂಗಳುಗಳ ಕಾಲ ಏನಿದ್ದರೂ ಹೊಸ ಸ್ನೇಹಿತರ ಪರಿಚಯ, ಸೀನಿಯರ್ಸ್ಗ್ ಗಳ ರಾಗಿಂಗ್, ಮೈಸೂರು ನಗರ ಪರ್ಯಟನೆಯಲ್ಲೇ ಕಳೆದುಹೊಯ್ತು. ಇದರ ಮಧ್ಯೆ ನಮ್ಮ ಕಾಲೇಜಿನಲ್ಲಿ ಪ್ರತೀವರ್ಷದಂತೆ ಆ ವರ್ಷದ ವಾರ್ಷಿಕ ಫೆಷ್ಟ್(ಹಬ್ಬ) ಶುರುವಾಯ್ತು. ಆ ಫೆಷ್ಟಿನಲ್ಲಿ ನಾವುಗಳೂ ಏನದರೂ ಕಾರ್ಯಕ್ರಮ ಕೊಡಬೇಕು ಅನ್ನೋ ಹಂಬಲ. ಆವಾಗ ಶುರುವಾಗಿದ್ದು ಈ ತಂಡಗಳನ್ನ ಕಟ್ಟಿಕೊಳ್ಳೋ ವಿಚಾರ. ನಮ್ಮ ಬ್ಯಾಚಿನಿಂದ ಎರಡು ತಂಡಗಳು "ಸ್ಕಿಟ್ ಮತ್ತು ಮ್ಯಾಡ್ ಆಡ್ಸ್ " ಕಾರ್ಯಕ್ರಮದಲ್ಲಿ ಭಾಗವಹಿಸಿದ್ವಿ.ಆದರೆ ಸ್ವಾರಸ್ಯಕರ ವಿಷಯ ಅಂದ್ರೆ, ಆ ಎರಡು ತಂಡಗಳ ಪೈಕಿ ನಾನು ಒಬ್ಬನೇ ಒಂದು ತಂಡದಲ್ಲಿ ಇದ್ದರೆ, ನಮ್ಮ ಈಗಿನ ತುಂಟ ತಂಡದ ಉಳಿದವರೆಲ್ಲರೂ ಇನ್ನೊಂದು ತಂಡದಲ್ಲಿದ್ದರು.
ನಾನು ಭಾಗವಹಿಸಿದ ತಂಡ ಮ್ಯಾಡ್ ಆಡ್ಸ್ ನಲ್ಲಿ ಎರಡನೆ ಬಹುಮಾನ ಗಿಟ್ಟಿಸಿದರೆ, ನನ್ನ ಸ್ನೇಹಿತರೆಲ್ಲರೂ ಇದ್ದ ಇನ್ನೊಂದು ತಂಡ- ಮ್ ಮ್ ಮ್, ತಮ್ಮ ಮೊಟ್ಟಮೊದಲ ಸ್ಟೇಜ್ ಷೋನಲ್ಲಿ "ಡಿಸ್-ಕ್ವಾಲಿಫೈ" ಆಗಿದ್ದರು. ಹಾಗಂತ ಸರಿಯಾಗಿ ಫರ್ಫಾರಮೆನ್ಸ್ ಕೊಡಲಿಲ್ಲ ಅಂತಲ್ಲ, ಬದಲಾಗಿ ಅಶ್ಲೀಲತೆ ಜಾಸ್ತಿ ಇತ್ತು ಅನ್ನೋ ಕಾರಣಕ್ಕಾಗಿ. ಆದರೆ, ಅವರು ಮಾಡಿದ ಆ ಸಾಹಸದಿಂದ ಸೀನಿಯರ್ಸ್-ಗಳ ಹಾಟ್ ಫೇವರೇಟ್ ಆಗಿದ್ದಂತು ಆಶ್ಚರ್ಯವೇ ಸರಿ.
ಇದಾದ ನಂತರ ಸ್ಕಿಟ್ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ನಮ್ಮ ಆ "ಡಿಸ್-ಕ್ವಾಲಿಫೈ" ಆದ ಸ್ನೇಹಿತರ ತಂಡ ಮತ್ತೊಮ್ಮೆ ಸ್ಕಿಟ್ ಮಾಡೋ ಯೋಚನೆ ಮಾಡಿದರು. ಆದರೆ ಈ ಬಾರಿ ಕೊಂಚ ವಿಭಿನ್ನವಾಗಿ ಮಾಡೋ ಯೋಚನೆ ಹೊತ್ತು, ನಮ್ಮ ಕಾಲೇಜಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಸ್ಕಿಟ್ ಮಾಡಿದರು. ಅದನ್ನ ಸ್ಕಿಟ್ ಅನ್ನೋದಕ್ಕಿಂತ ಮೂವಿ ಸ್ಫೂಫ್ ಅನ್ನುತ್ತಾರೆ( ಅಂದರೆ ಒಂದು ಚಲನಚಿತ್ರದ ಕಥೆಯ ಎಳೆಯನ್ನು ತೆಗೆದುಕೊಂಡು ಆ ಕಥೆಗೆ ವಿಭಿನ್ನ ಆಯಾಮಗಳನ್ನ, ಉಪಕಥೆಗಳನ್ನ ಸೇರಿಸಿ ಇನ್ನಷ್ಟು ಸ್ವಾರಸ್ಯಕರವಾಗಿ ಮಾಡುವುದು. ಆದರೆ ಇಲ್ಲಿ ಸ್ಟೇಜ್ ಮೇಲೆ ಅಭಿನಯಿಸುವ ಯವುದೇ ಕಲಾವಿದ ಮಾತನಾಡುವುದಿಲ್ಲ, ಬದಲಾಗಿ ಹಿನ್ನೆಲೆ ಧ್ವನಿಗೆ ಅನುಗುಣವಾಗಿ ತನ್ನ ದೇಹ ಚಲನ ವಲನಗಳ ಮೂಲಕ ಅಭಿನಯಿಸಬೇಕು). ಇಂತಹ ಕರ್ಯಕ್ರಮದಲ್ಲಿ ಅವರೆಲ್ಲ ಸೇರಿ "ಬಭ್ರುವಾಹನ" ಚಲನಚಿತ್ರವನ್ನ ಆಯ್ದು, ಅದನ್ನ "ಗಬ್ಬುವಾಹನ" ಅನ್ನೋ ರೀತಿಯಲ್ಲಿ ಬದಲಾಯಿಸಿ ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು .
ನಿಜವಾಗಿಯೂ ಆ ಒಂದು ಕಾರ್ಯಕ್ರಮವನ್ನ ಎಲ್ಲರೂ ಮುಕ್ತಕಂಠದಿಂದ ಪ್ರಶಂಶಿಸಿದರು.ಆ ಅರ್ಹತೆ ಅದಕ್ಕಿತ್ತು .ನಮ್ಮ ಕಣಗಾಲನ ಹಿನ್ನೆಲೆ ಧ್ವನಿ, ಗಬ್ಬುವಾಹನಾಗಿ ಕಿಟ್ಟಿ ಹಾಗೂ ಅರ್ಜುನನಾಗಿ ಕೆ.ಪಿಯ ಅಭಿನಯ, ತೇಜಸ್ವಿ, ,ವಿನಯ್,ಗಿರಿ, ಇವರೆಲ್ಲರ ಪಾತ್ರ ಪೋಷಣೆಗಳು ನಿಜಕ್ಕೂ ನಮಗೆಲ್ಲ ಅಚ್ಚರಿಯ ಸಂತಸಗಳಾಗಿದ್ದವು. ಚಿದು ಪಾತ್ರಧಾರಿಯಾಗಿರದಿದ್ದರು ಸ್ಕ್ರಿಪ್ಟ್ ವಿಷಯದಲ್ಲಿ ಸಹಾಯ ಮಾಡಿದ್ದ.ವಿಪರ್ಯಾಸ ಅಂದರೆ ಆ ತಂಡದಲ್ಲಿ ನಾನಿನ್ನೂ ಸದಸ್ಯನಾಗಿರಲಿಲ್ಲ. ಆ ಸ್ಕಿಟ್ಟಿನಲ್ಲಿ ನಾನೂ ಒಂದು ಪಾತ್ರವಾಗಬೇಕಿತ್ತು ಅನ್ನಿಸದೇ ಇರಲಿಲ್ಲ.
ಆದರೆ, ನನ್ನ ಅದೃಷ್ಟಕ್ಕೆ ಆ ತಂಡದ ಎಲ್ಲರೂ ನನ್ನನ್ನ ಅವರ ತಂಡದೊಳಗೆ ಒಬ್ಬ ಸದಸ್ಯನಾಗಿ ಸೇರಿಸಿಕೊಳ್ಳಬಯಸಿದ್ದು. ಆ ತಂಡದಲ್ಲಿದ್ದವ್ರೆಲ್ಲರೂ ಹಾಸ್ಟೆಲ್ಲಿನಲ್ಲಿ ನನ್ನ ಹತ್ತಿರದ ಒಡಾನಾಡಿಗಳಾಗಿದ್ದರಿಂದ ನನ್ನನ್ನು ತಮ್ಮವನೊಬ್ಬನಾಗಿ ಸೇರಿಸಿಕೊಳ್ಳಬಯಸಿದರೇನೊ. ಏನೇ ಆದ್ರೂ, ಅವರ ಆ ನಡೆ ನನಗೆ ಅತ್ಯಂತ ಖುಶಿ ನೀಡಿದ್ದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಅದಕ್ಕೆ ಧನ್ಯವಾದಗಳನ್ನ ತಿಳಿಸುತ್ತೇನೆ.
ನಮ್ಮ ತಂಡವೇನೋ ಅಸ್ತಿತ್ಥ್ವಕ್ಕೆ ಬಂತು, ಆದರೆ ತಂಡಕ್ಕೆ ಹೆಸರು ಇನ್ನಾ ಶೋಧನೆಯಲ್ಲಿತ್ತು. ಆ ಸಮಯದಲ್ಲಿ, ನಮ್ಮ ಕಾಲೇಜಿನಲ್ಲಿ ನಮ್ಮ ಸೀನಿಯರ್ಸ್-ಗಳ ಒಂದು ಸ್ಕಿಟ್ ತಂಡವಿತ್ತು. ಅವರು ತಮ್ಮನ್ನ "ಕೂಳೆ ಡಾಕ್ಸ್"(ಕೂಳೆ ಅಂದ್ರೆ ಮೈಸೂರು ಭಾಷೇಲಿ ಜಾಲಿಯಾಗಿರುವುದು ಎಂದರ್ಥ.ಡಾಕ್ಸ್ ಅನ್ನೋದು ಡಾಕ್ಟರ್ಸ್-ಗೆ ಶಾರ್ಟ್ ಫಾರ್ಮ್) ಅಂತ ಕರೆದುಕೊಳ್ಳೊವ್ರು. ಅವರ ಒಂದು ಸ್ಕಿಟ್ತಿನಲ್ಲಿ ಒಂದು ಹಾಸ್ಯ ಸನ್ನಿವೇಶದಲ್ಲಿ ಈ ತರಹದ ಪ್ರಷ್ಣಾರ್ಥಕ ಪ್ರಸಂಗವಿತ್ತು- "ಕಾಲಿಲ್ಲದವನಿಗೆ "ಕುಂಟ" ಅಂತ ಕರೀತಾರೆ, ಕಾಲಿಲ್ಲದವನಿಗೆ ಕುಂಟ ಅಂತ ಕರೀತಾರೆ, ಆದರೆ, ಏನಿಲ್ಲದವನಿಗೆ "ತುಂಟ" ಅಂತ ಕರಿತಾರೆ???" ಹೌದು, ಆ ಸಾಲಿನ ಅರ್ಥವನ್ನ ನೀವೆಲ್ಲ ಈಗಾಗಲೆ ಕಲ್ಪಿಸಿಕೊಂಡಿರುತ್ತೀರಾ. ಅದು ವಿಭಿನ್ನಾರ್ಥ ಕೊಟ್ಟರೂ, "ತುಂಟ" ಅನ್ನೋ ಪದ ನಮ್ಮೆಲ್ಲರಿಗೂ ಇಷ್ಟವಾಗಿತ್ತು. ಹಾಗಾಗಿ ಅದನ್ನೇ ನಮ್ಮ ತಂಡದ ಹೆಸರು ಮಾಡಿಕೊಳ್ಳೋ ಒಮ್ಮತಕ್ಕೆ ಬಂದೆವು. ಇನ್ನು ನಾವೆಲ್ಲ ನಮ್ಮ ಕಾಲೇಜಿಗೆ ಕಾಲಿಟ್ಟ ವರ್ಷ ೨೦೦೧ನೆ ಇಸವಿಯದ್ದರಿಂದ, ಆ ಇಸವಿಯನ್ನ ನಮ್ಮ ತಂಡದ ಹೆಸರಿನೊಂದಿಗೆ ಸೇರಿಸಿಕೊಂಡೆವು.
ಹೀಗೆ ಜನಿಸಿದ್ದೆ ನಮ್ಮ "೨೦೦೧ರ್ ತುಂಟ"ರು ತಂಡ. ಈ ನಮ್ಮ ಕಥೆ ನಿಮಗೆಲ್ಲರಿಗೂ ಖುಷಿ ನೀಡಿದ್ದೇ ಹೌದಾದರೆ, ಇದೇ ರೀತಿಯ ಸ್ವಾರಸ್ಯಕರ ಕಥೆಗಳನ್ನ ನಿರೀಕ್ಶಿಸಿ. ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ. ಮತ್ತೆ ಬರೆಯುತ್ತೇನೆ.
ಚೆನ್ನಾಗಿತ್ತು.ನನ್ಗುನನ್ನ ಕಾಲೇಜ್ ಡೇಸ್ ನೆನಪಾದವು.
ReplyDeleteಹೀಗೆ ಬರಿತ ಇರಿ ಕೂಳೆ ಡಾಕ್ಸ್ !!??
ee gagale e mail sikkr beku.. thuntas kade inda by order sullu vishayagallana bariyodu nilliso... hogelikeya paatra sigolla... bere jana daari tapputare , mata hattisodu nillisu..bitti page andre mai tumba pen ante.. swalpa, huummmmm..
ReplyDeleteಎಲ್ಲ ಬ್ಲಾಗ್ಸ್ ನು ಓದಿದಿನಿ ಕಣೋ .
ReplyDeleteಆರ್ಕುಟ್ ಅಲಿ ಅಪ್ಡೇಟ್ ಹಾಗ್ತಾ ಇರುತಲ್ಲ , ಅವಾಗವಾಗ ಓದ್ತಿರ್ತೀನಿ.
ಕೀಪ್ ರೈಟಿಂಗ್ :)
stop writing false and foolish things..
ReplyDeletestop writimg foolish and false things
ReplyDeletele magane, i haven't added up any of our stories.thats u and me....who were so studious and loyal in postings...so wait and watch, i'l be gonna post our dosti ka kissa...he he
ReplyDelete